ಸ್ಮಶಾನದ ಹೆಸರಿನಲ್ಲಿ ಲ್ಯಾಂಡ್ ಮಾಫಿಯಾ ಜನರು ಎದುರಾಳಿ ಲ್ಯಾಂಡ್ ಡೀಲರ್ ಗಳನ್ನು ಪೇಚಿಗೆ ಸಿಲುಕಿಸುವ ಪ್ರಯತ್ನಗಳನ್ನು ಮಾಡುತ್ತಿರುವ ರಾಜಕೀಯಕ್ಕೆ ಪರಿಸರ ಕಾಪಾಡಬೇಕಾದ ಕೆರೆಗಳು ನಾಷವಾಗುತ್ತಿವೆ.
ಓತ್ತುವರಿ ತೆರವು ಎಂದು ಈಗಾಗಲೆ ನಗರವನ್ನ ಸ್ಮಷಾನ ಮಾಡಿರುವ ಜಿಲ್ಲಾಡಳಿತದ ಹಿಡಿತ ಹೊಂದಿರುವ ರಾಜಕೀಯ ಪ್ರಭುಗಳು ಇಡೀ ನಗರದಲ್ಲಿ ಸ್ಮಶಾನದ ವಿಚಾರವಾಗಿ ಜನರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ.
ನಾಳೆ ಅಮ್ಮಾನಿಕೆರೆ ಹೊಡೆದು ತಿಗಳರಿಗೊಂದು ಸ್ಮಶಾನ ಎನ್.ಅರ್.ಕಾಲೋನಿ ದಲಿತರಿಗೊಂದು ಸ್ಮಶಾನ ಮಾಡಿಕೊಟ್ಟರೆ ಆಶ್ಚರ್ಯವಿಲ್ಲಾ ಎನ್ನುತಿದ್ದಾರೆ ಪರಿಸರ ಪ್ರೇಮಿಗಳು.
ಓತ್ತುವರಿಯಾದ ಕೆರೆ ಪ್ರದೇಶವನ್ನು ಸಕ್ರಮಗೊಳಿಸುವುದು, ಕೆರೆ ಅವಲಂಬಿತ ರೈತರ ಜಮೀನನ್ನು ಲೇಔಟ್ ಮಾಡುವುದು, ನಂತರ ಪ್ರಯೋಜನಕ್ಕೆ ಬಾರದ ಕೆರೆ ಎಂದು ಕೆರೆ ಪರಿವರ್ತಿಸುವುದು, ಎದುರಾಳಿ ಡೀಲರ್ ಗಳು ಮಾಡುತ್ತಿರುವ ವ್ಯವಹಾರಗಳಿಗೆ ಕಲ್ಲಾಕುವುದು, ದಲಿತರನ್ನು ಎತ್ತಿ ಕಟ್ಟಿ ಅಟ್ರಾಸಿಟಿ ಕೇಸುಹಾಕಿಸುವುದಾಗಿ ಹೆದರಿಸುವುದು, ಪಾರ್ಕುಗಳನ್ನು ಆಕ್ರಮಿಸುವುಧು ಇನ್ನೂ ಮುಂತಾದ ಸ್ಕೀಮುಗಳಿಂದ ಮುಂದಾಗಿರುವ ಜಿಲ್ಲಾಡಳಿತದ ಹಿಂದಿರುವ ಭೂಮಾಫಿಯ ಜಗತ್ತು ನಮ್ಮ ನಗರವನ್ನು ಅಭೀವೃಧಿ ಮಾಡುತೇವೆಂಬ ಮಂತ್ರದಿಂದ ಜನರಿಗೆ ಮಂಕು ಬೂಧಿ ಎರಚುತ್ತಿದೆ.
ವ್ಯಕ್ತಿಯ ಅನುಭವದಂತೆ ಆತನ ನಡವಳಿಕೆ ಇರುತ್ತದೆಂಬ ಲೋಕೋಕ್ತಿ ಸುಳ್ಳಲ್ಲ ಎಂಬುಧಕ್ಕೆ ನಮ್ಮ ತುಮಕೂರಿನ ಶಿವಣ್ಣನ ಕರ್ಮಕಾಂಡ ಕೇಳಿ - ಕುಣಿಗಲ್ ರಸ್ತೆಯ ಬನಶಂಕರಿ ದೇವಾಲಯದ ಎದುರಿಗೆ ಒಂದು ಪೆಟ್ರೋಲ್ ಬಂಕ್ ಇದೆ, ಅದು ಹಿಂದೆ ಮಾರಾಟಿಗರಿಗೆ ಸೇರಿದ ಸ್ಮಶಾನದ ಜಾಗವಾಗಿತ್ತು, ಈ ವಿಚಾರವಾಗಿ ರೆವಿನ್ಯೂ ಮ್ಯಾಪ್ ತೆಗೆಸಿದರೆ ವಿಚಾರ ಸ್ವಷ್ಟ ವಾಗುತದೆ. ಆ ಜಾಗವನ್ನು ಹಕ್ಕುದಾರನಲ್ಲದವನಿಂದ ಕೊಂಡು ಕೊಂಡವನು ನಮ್ಮ ಶಿವಣ್ಣನೆ, ಈ ಬಗ್ಗೆ ವಿವಾದವೆದ್ದಾಗ ಅದನ್ನು ಮಾರಿರುವ ವ್ಯಕ್ತಿ ಇಂದು ನಮ್ಮ ನಿಮ್ಮೆಲ್ಲರ ಮೆಚ್ಚಿನ ಶಾಸಕ ಮಂತ್ರಿ. ಹೀಗೆ ಸ್ಮಶಾನದ ವಿಚಾರವಾಗಿ ಜಮೀನು ನುಂಗಿ ಅನುಭವವಿರುವ ವ್ಯಕ್ತಿ ಅಧಿಕಾರಕ್ಕೆ ಬಂದಾಗಿನಿಂದ ತುಮಕೂರು ನಗರದಲ್ಲಿ ಜನ ಸ್ಮಶಾನ ಬೇಕು ಸ್ಮಶಾನ ಬೇಕು ಎಂದು ಬಂಬಡಿ ಹೊಡಿತಿದ್ದಾರೆ. ಜನ ಅಲ್ಲ ಬಿಡಿ ಲ್ಯಾಂಡ್ ಮಾಫಿಯಾದವರು ಈ ಕೆಲಸ ಮಾಡುತ್ತಿದ್ದಾರೆ.