ಈಗಾಗಲೇ ಅಭಿವೃದ್ದಿ ಆಗಿರುವ ರಸ್ತೆಗೆ ಬಿಲ್ ಮಾಡಿಸುವ ಹುನ್ನಾರದಲ್ಲಿ ಲೋ.ಇ. ವಿಭಾಗ, ತುಮಕೂರು

_
_

SEE THE VIDEO'S LIVE VERY SHORTLY IN THIS BLOG


ತುಮಕೂರು ತಾಲ್ಲೂಕು ದೇವರಾಯನ ದುರ್ಗ ಕ್ರಾಸ್ ನಿಂದ ವಡ್ಡರ ಹಳ್ಳಿ, ದುರ್ಗದ ಹಳ್ಳಿ, ಅನುಪನಹಳ್ಳಿ ಮೂಲಕ ಹಾದು ಹೋಗುವ ಕಿ.ಮೀ 3.20 ರಿಂದ 5.50 ರವರೆಗೆ ರಸ್ತೆ ಅಭಿವೃದ್ದಿ ಮತ್ತು ಡಾಂಬರೀಕರಣ ಕಾಮಗಾರಿಯ ಅಲ್ಪಾವಧಿ ಟೆಂಡರ್ ಪ್ರಕಟಣೆಯನ್ನು ದಿನಾಂಕ 22-01-2009 ರ ಸ್ಥಳೀಯ ಪತ್ರಿಕೆ ’ಪ್ರಜಾಪ್ರಗತಿ’ ಯಲ್ಲಿ ಕರೆದಿರುವ ಲೋ.ಇ. ವಿಭಾಗ, ತುಮಕೂರು , ಸದರಿ ಕಾಮಗಾರಿಯನ್ನು ಕ್ರಮ ಸಂ. ೩೪, ೩೫, ೩೬, ೩೭ ರಲ್ಲಿ ಒಟ್ಟು ೨ ಕೋಟಿ ರೂಗಳಲ್ಲಿ ನಾಲ್ಕು ಕಾಮಗಾರಿಯಾಗಿ ವಿಂಗಡಿಸಿ ಈಗಾಗಲೇ ಅಭಿವೃದ್ದಿ ಆಗಿರುವ ರಸ್ತೆಯನ್ನು ಮತ್ತು ಕೇವಲ ವಡ್ಡರಹಳ್ಳಿ ಬಳಿಯ ಸ್ವಲ್ಪ ರಸ್ತೆಯ ಕಾಮಗಾರಿಗಾಗಿ ಮತ್ತು ಬರೀ ಡಾಂಬರೀಕರಣದ ಕೆಲವು ಕಾಮಗಾರಿಗಾಗಿ ಮತ್ತೊಮ್ಮೆ ಅಭಿವೃದ್ದಿ ಮಾಡುವ ನಾಟಕ ಸೃಷ್ಠಿಸಿ, ಸುಮಾರು ಎರಡು ಕೋಟಿ ರೂಗಳನ್ನು ಕಂಟ್ರಾಕ್ಟರ್ ಎಂ. ಶಿವಾನಂದ್ ಮತ್ತು ಹೆಬ್ಬಾಕ ರವಿ ಜೊತೆ ಸೇರಿಕೊಂಡು ಸರ್ಕಾರಕ್ಕೆ ವಂಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ರಾಗಿರುತ್ತಾರೆ. ಸದರಿ ರಸ್ತೆ ಈಗಾಗಲೇ ಅಭಿವೃದ್ದಿ ಆಗಿರುವ ಬಗ್ಗೆ ದಿನಾಂಕ ೦೭-೦೨-೨೦೦೯ ರಂದು ವಿಡಿಯೋ ಚಿತ್ರಣವನ್ನು ಶ್ರೀಯುತ ಯದುಕುಮಾರ್ ತೆಗೆಸಿ ಹಾಜರು ಪಡಿಸಿರುತ್ತಾರೆ. ತಿಳಿದಿರುವಂತೆ ಇನ್ನೂ ಕಾಮಗಾರಿಯ ವರ್ಕ ಆರ್ಡರ್ ನೀಡಿರುವುದಿಲ್ಲ. ೨೮-೦೧-೨೦೦೯ ಸಂಜೆ ೪-೦೦ ಗಂಟೆ ವರೆಗೆ ಕಾಮಗಾರಿ ಟೆಂಡರ್ ಹಾಕಲು ಕೊನೇ ಗಳಿಗೆಯಾಗಿದ್ದು. ಸದರಿ ಟೆಂಡರ್ ಪರಿಷ್ಕರಣೆ ಮತ್ತು ಆಯ್ಕೆ ಪ್ರಕ್ರಿಯೆ ನಡೆದಿಲ್ಲ. ಸದರಿ ಟೆಂಡರ್ ಅನ್ನು ರಾಜಕೀಯ ಹಿತಾಸಕ್ತಿಯಲ್ಲಿ ಎಂ. ಶಿವಾನಂದ್ ಮತ್ತು ಹೆಬ್ಬಾಕ ರವಿ ಎಂಬ ಪಾಲುದಾರಿಕಾ ಕಾಂಟ್ರಾಕ್ಟರ್ ದಾರರಿಗೆ ನೀಡಿ ಕೆಲಸ ಮಾಡದೆ ಈಗಾಗಲೇ ಅಭಿವೃದ್ದಿ ಆಗಿರುವ ರಸ್ತೆಗೆ ಬಿಲ್ ಮಾಡಿಸುವ ಹುನ್ನಾರದಲ್ಲಿ ಲೋ.ಇ. ವಿಭಾಗ, ತುಮಕೂರು ಮುಂದಾಗಿರುತ್ತಾರೆ.----ಶ್ರೀಯುತ ಯದುಕುಮಾರ್

ಸದರಿ ಮಹಜರು ಬರೆಯಲು ಕಾಂಟ್ರಾಕ್ಟರ್ ಹೆಬ್ಬಾಕ ರವಿ ರವರ ಸಂಬಂದಿಯನ್ನು ಆಯ್ಕೆ ಮಾಡಿಕೊಂಡು ಅಧಿಕಾರಿಗಳು ಪೂರ್ವಾಗ್ರಹ ಪೀಡಿತರಾಗಿರುವ ಬಗ್ಗೆ ರುಜುವಾತು ಪಡಿಸಿರುತ್ತಾರೆ.